ಕಷ್ಟವೇ ಸುಖಕ್ಕೆ ಸೋಪಾನ
ಕಷ್ಟವೇ ಸುಖಕ್ಕೆ ಸೋಪಾನ ತಂದೆ ತಾಯಿ ಮನೆಯಲ್ಲಿ ಯುವರಾಣಿಯಂತೆ ಬೆಳೆದ ಹುಡುಗಿ, ಜೀವನದಲ್ಲಿ ತುಂಬಾ ಆಸೆ ಕನಸು ಹೊತ್ತು ಏನಾದರೂ ಸಾಧಿಸಿ ಸಮಾಜದಲ್ಲಿ ಸ್ಥಾನ ಮಾನ ಗಳಿಸಿ ತನ್ನದೇಯಾದ ಹೆಸರು ಮಾಡಬೇಕೆಂದು ಆಸೆ ಕನಸು ಹೊತ್ತಿದ್ದ ರಾಧಾ. ರಾಧಾ ತುಂಬಾ ಜಾಣೆ.ಇವಳ ತಂದೆ ತಾಯಿಗೆ ನಾಲ್ಕು ಜನ ಹೆಣ್ಣಮಕ್ಕಳು. ಇವಳು ತಂದೆ ತಾಯಿಗೆ ನಾಲ್ಕನೆಯ ಮಗಳು. ತಂದೆ ತಾಯಿ ನಾಲ್ಕೂ ಹೆಣ್ಣು ಮಕ್ಕಳನ್ನು ತುಂಬಾ ಮುದ್ದಾಗಿ ಬೆಳೆಸಿದ್ದರು. ಎಲ್ಲರೂ ಸರಸ್ವತಿ ಪುತ್ರಿಯರಂತೆ ತುಂಬಾ ಜಾಣರು. ರಾಧಾ ನೋಡಲು ಸಾದರಣವಾಗಿದ್ದಳು ಆದರೆ ಪ್ರತಿಭೆಯ ಗಣಿಯಾಗಿದ್ದಳು ಸರಸ್ವತಿ ಪುತ್ರಿಯಂತೆ ತುಂಬಾ ಬುದ್ಧಿವಂತ ಹುಡುಗಿ. ಯಾವಾಗಲೂ ಶಾಲೆಯಲ್ಲಿ ಪಠ್ಯ ಹಾಗೂ ಸಹ ಪಠ್ಯ ಚಟುವಟಿಕೆಯಲ್ಲಿ ಮೊದಲನೆಯ ಸ್ಥಾನ ಪಡೆಯುತ್ತಿದ್ದಳು. ಎಲ್ಲರಿಗೂ ಅಚ್ಚಮೆಚ್ಚಿನ ಮಗಳು ಹಾಗೂ ವಿದ್ಯಾರ್ಥಿನಿಯಾಗಿದ್ದಳು. ಕಷ್ಟವೆಂದರೆ ಏನು ಎಂದು ತಿಳಿಯದಂತೆ ತಂದೆ ತಾಯಿ ಬೆಳೆಸಿದ್ದರು. ರಾಧಾ D. Ed ಓದಿದಳು ಅವಳ ಶಿಕ್ಷಣ ಮುಗಿದ ಮೇಲೆ ತಂದೆ ತಾಯಿ ಗುಣ ನಡತೆಯಲ್ಲಿ ಉತ್ತಮನಾದ ನೋಡಲು ಸುಂದರನಾದ ಯುವಕನೊಂದಿಗೆ ಮದುವೆ ಮಾಡಿದರು. ಆ ಯುವಕ ತಂದೆ ತಾಯಿಗೆ ಒಬ್ಬನೇ ಮಗ ತುಂಬಾ ಜಾಣ ಹಾಗೂ ಪ್ರತಿಭಾವಂತನಾಗಿದ್ದ. ಆಸ್ತಿ ಪಾಸ್ತಿ ಅಷ್ಟೇನಿಲ್ಲದಿದ್ದರೂ ಗುಣ, ಸ್ವಭಾವ ಮತ್ತು ನಡತೆಯಲ್ಲಿ ಶ್ರೀಮಂತನಾಗಿದ್ದ. ಅವನದು ತುಂಬಾ ಸಂಪ್ರದಾಯಸ್ಥ ಕುಟುಂಬ. ಆದರೂ ಅವರು ಸೊಸೆ ಮತ್ತು ಮಗನ ಮೇಲೆ ಯಾವುದೇ...