ಸ್ಪೂರ್ತಿ ಸೆಲೆ



ಬದುಕೆಂಬ ಶಾಲೆಯು ಹಲವಾರು ಪಾಠ ಕಲಿಸಿದ ದೇಗುಲ. ಅಲ್ಲಿ ಕೆಲವು ಏಳುಗಳು ಇನ್ನೂ ಕೆಲವು ಬೀಳುಗಳು ಇವುಗಳ ಮಧ್ಯೆ ಸುಂದರ ಕಲಾಕೃತಿ ರೂಪಿಸುವುದೇ ಜೀವನ. ಇಂತಹ ಜೀವನದಲ್ಲಿ ಕಲಿತ ಒಂದು ಪಾಠದ ಸಂದರ್ಭದ ಒಂದು ತುಣುಕನ್ನು ನಿಮ್ಮ ಮುಂದೆ ಇಡಲು ಚಿಕ್ಕದೊಂದು ಪ್ರಯತ್ನ.  ಒಂದು ದಿನ ಹೀಗೆ ದಾರಿಯಲ್ಲಿ ಬರುವಾಗ ನಾನು ನನ್ನ ನೆಚ್ಚಿನ ಗುರುಗಳನ್ನು ಬೇಟಿಯಾದ ಕ್ಷಣ. ಮುಸ್ಸಂಜೆ ವೇಳೆಲಿ ತಿಳಿಯಾದ ತಂಪನೆಯ ಗಾಳಿಯಲ್ಲಿ ಪಾರ್ಕಿನಲ್ಲಿ ವಿಹರಿಸುತ್ತಿರುವಾಗ ನನ್ನ ನೆಚ್ಚಿನ ಗುರುಗಳನ್ನು ಕಂಡು ಬಹಳ ಸಂತೋಷದಿದ ಮಾತನಾಡಿಸಿದೆ ಸರ್ ಆರಾಮಿದ್ದಿರಿ? ಹೆಂಗ ಇದ್ದಿರಿ? ನಾನು ಸುಮಾ ನಿಮ್ಮ ವಿದ್ಯಾರ್ಥಿನಿ ನೆನಪಿದೆಯಾ ನೀವು ನನಗೆ ಪಿಯುಸಿ ಯಲ್ಲಿ ಕನ್ನಡ ಕಲಿಸುತ್ತಿದ್ದಿರಿ ಅಂತ ಹೇಳಿ ಅವರ  ಕುಶಲ ಕ್ಷೇಮ ಸಮಾಚಾರ ವಿಚಾರಿಸಿದೆ. ನಂತರ ಸರ್ ನನಗೆ ನನ್ನ ಜೀವನದ ಬಗ್ಗೆ ವಿಚಾರಿಸಿದರು. ಹೇಳು ಸುಮಾ ನೀನು ಎಲ್ಲಿದ್ದಿ? ಏನು ಮಾಡ್ಲಿಕತ್ತಿ? ಮದುವೆ ಆಯ್ತಾ? ಮಕ್ಕಳು ಏಷ್ಟು? ಅಂತ ಕೇಳಿದ್ರು ನಾನು ಅದಕ್ಕೆ ಸರ್ ನಾನು ಮಾಸ್ಟರ್ಸ್ ಮಾಡಿ, ಜಾಬ್ ಮಾಡ್ಲಿಕತ್ತಿನ್ರಿ lecture job ರಿ ಅಂದೆ ಅದಕ್ಕೆ ಅವರು ಕೇಳಿದ್ರು ಮಾಸ್ಟರ್ಸ್ ನಾ ಯಾವುದರಲ್ಲಿ ನಾನು ಹೆಮ್ಮೆಯಿಂದ ಬೀಗಿ ಸರ್ ಇಂಗ್ಲೀಷ್ ನಲ್ಲಿ ಅಂದೆ ಅದಕ್ಕೆ ಅವರು ಓ ಹೌದಾ ನಾನು ಕೇಳಿದ್ದು ಯಾವುದರಲ್ಲಿ ಅಂತ ಎಂದು ಮತ್ತೆ ಒತ್ತಿ ಒತ್ತಿ ಕೇಳಿದ್ರು ನಾನು ಮತ್ತೆ ಮತ್ತೆ ಅದೇ ಉತ್ತರ ನೀಡಿದೆ ಅದಕ್ಕೆ ಅವರು ಹೇಳಿದ್ರು ಮಾಸ್ಟರ್ಸ್ ನ ಯಾವ ವಿಷಯದಲ್ಲಿ ಮಾಡಿದೆ ಎಂದು ನನ್ನ ಪ್ರಶ್ನೆ ಅಲ್ಲ ನಾನು ಕೇಳಿದ್ದು ನೀನು ನಿನ್ನ ಜೋವೋಪಾಯಕ್ಕಾಗಿ ಮಾಡಿದ ಮಾಸ್ಟರ್ಸ್ ಎಷ್ಟು ಮುಖ್ಯವೋ ಅಷ್ಟೇ ಈಗ ನಾನೂ ಹೇಳುವ ವಿಷಯದಲ್ಲೂ ನೀನು ಮಾಸ್ಟರ್ಸ್ ಮಾಡಿ ಹಿಡಿತ ಸಾಧಿಸುವುದು ಅಷ್ಟೆ ಮುಖ್ಯ ಎಂದರು ನನಗೆ ಅರ್ಥವಾಗಲಿಲ್ಲ ಸರ್ ನನಗೆ ನೀವು ಹೇಳಿದ ಮಾತು ತಿಳಿಲಿಲ್ಲರಿ ಅಂದೆ ಅದಕ್ಕೆ ಸರ್ ಬಾ ನಾನು ನಿನಗೆ ತಿಳಸ್ತಿನಿ ಅಂತ ಅವರ ಸ್ವಂತ ಮಗಳಿಗೆ ತಲೆ ಸವರಿದಂತೆ ತಲೆ ಸವರಿ ಹೇಳಿದ್ರು ಕೇಳಿಲ್ಲಿ ಜೀವನದಲ್ಲಿ ವಿದ್ಯ ಎಷ್ಟು ಮುಖ್ಯವೋ ಅಷ್ಟೇ ವಿನಯ , ಸಂಯಮ, ಸದ್ಬುದ್ಧಿ, ಸದಾಚಾರ, ದಯೆ ,ದಾಕ್ಷಿಣ್ಯ, ಕರುಣೆ, ಸೌಹಾರ್ದತೆ, ಸಹಾಯ, ಪ್ರೀತಿ ಇವುಗಲ್ಲಿಯೂ ಮಾಸ್ಟರ್ಸ್ ಮಾಡಿ ಪಂಚೇಂದ್ರಿಯಗಳ ಮೇಲೆ ಹಿಡಿತ ಸಾಧಿಸುವುದು ತುಂಬಾ ಮುಖ್ಯ ಎಂದರು ಇವು ಒಂದು ಒಳ್ಳೆಯ ಊಟದಲ್ಲಿ ಉಪ್ಪು, ಹುಳಿ, ಖಾರ, ಸಿಹಿ ಎಷಟರಮಟ್ಟಿಗೆ ಮುಖ್ಯವೋ ಅಷ್ಟೇ ಇವು ಕೂಡಾ ಜೀವನ ಎಂಬ ಸೊಗಸಾದ,  ರುಚಿಯಾದ ಊಟದಲ್ಲಿ ಅಷ್ಟೇ ಮುಖ್ಯ. ಅಂದಾಗ ಮಾತ್ರ ಜೀವನ ಎಂಬ ಪಯಣದಲ್ಲಿ ಸುಂದರ ಕಲಾಕೃತಿ ರೂಪಿಸಿ ಬಾಳು ಬಂಗಾರ ಮಾಡಿಕೊಳ್ಳಲು ಸಾಧ್ಯ ಎಂದರು. ಅಂತಹ ಮಾತನ್ನು ಕೇಳಿ ಅವರನ್ನು ಬೇಟಿಯಾಗಿ ನನ್ನ ಮನ ಒಂದೊಮ್ಮೆ ಸಾಕ್ಷಾತ್ ಸರಸ್ವತಿಯನ್ನೆ ಕಂಡಷ್ಟು ಸಂತೋಷದಿಂದ ಕುಣಿದಾಡಿತು. ಅವರ ದರ್ಶನ ಪಡೆದ ನಾನೇ ಧನ್ಯಳು ಎಂದೇನಿಸಿತು ನಂತರ ಮತ್ತೆ ಅವರ ಪಾದ ಮುಟ್ಟಿ ನಮಸ್ಕರಿಸಿ ನಾನು ನನ್ನ ಮನೆಗೆ ಮರಳಿದೆ. ಅದಕ್ಕೆ ಇರಬೇಕು ಹಿರಿಯರು ಹೇಳಿದ್ದು ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು ಅಂತ. ಅಂದಾಗ ಮಾತ್ರ ಜೀವನದಲ್ಲಿ ಇಂತಹ ಸಾಕ್ಷಾತ್ಕಾರಗಳನ್ನು ಕಾಣಲು ಸಾಧ್ಯ.
ಸಂಧ್ಯಾ ಕುಲ್ಕರ್ಣಿ