ಮಲ್ಲಿಗೆಯ ಮನದಲಿ ಪ್ರೇಮದ ರಂಗವಲ್ಲಿ


ಓ ಮಲ್ಲಿಗೆ ನೀ ಎನ್ನೋಲವೆ
ನಿನ್ನೊಲುವೆ ಎನಗೆ ಚೆಲುವೆ
ಮಂದಹಾಸದ ಮೊಗವೆ
ನಿನ್ನ ಮಂದಹಾಸದಿ ನಾ ಕಳೇವೆ ಜೀವವೇ||1||

ಮಲ್ಲಿಗೆಯ ಮುಗ್ದ ಮನದಲಿ 
ಪ್ರೇಮದ ರಂಗಿನ ರಂಗು ರಂಗವಲ್ಲಿ 
ಚಿತ್ತಾರ ಮುಡಿತ್ತೆನ್ನ ಮುದ್ದಿನ ಹೃದಯದಲಿ
ಚಿತ್ರ ಬಿಡಿಸುವ ಹಂಬಲ ಎನ್ನ ಕೈಗೆ ಪ್ರೀತಿಯಲಿ||2||

ಜಗದಿ ಮಲ್ಲಿಗೆಯ ಪರಿಮಳ ಸೂಸಿತು
ಪರಿಮಳದಿ ನವ ಆಸೆ ಕಣ್ಣಂಚಲಿ ಚಿಗುರಿತು
ಚಿಗುರಿದ ಆಸೆಯಲಿ ರಂಗಿನ ಚಿತ್ರ ಮೂಡಿತು
ರಂಗು ರಂಗಿನ ಚಿತ್ರ ಬಾಳ ಬೆಳಗಿತು||3||

ಮಲ್ಲಿಗೆಯ ಗರ್ಭದಿ ಹಕ್ಕಿಗಳ ಚಿಲಿಪಿಲಿ ಝೇಂಕಾರ 
ಝೇಂಕಾರದಿ ಮೂಡಿತು ಮನದಲಿ ಮಮಕಾರ
ನಿಸರ್ಗವೆಂಬ ರಾಣಿಗೆ ಕುಸುಮವೇ ಅಲಂಕಾರ
ಮಲ್ಲಿಗೆಯ ಅಂದವ ನೋಡಿ ಮೂಡಿತು ಮನದಲಿ ಪ್ರೇಮದ ಹರ್ಷೋದ್ಗಾರ.||4||