ಕಷ್ಟವೇ ಸುಖಕ್ಕೆ ಸೋಪಾನ
ಕಷ್ಟವೇ ಸುಖಕ್ಕೆ ಸೋಪಾನ
ತಂದೆ ತಾಯಿ ಮನೆಯಲ್ಲಿ ಯುವರಾಣಿಯಂತೆ ಬೆಳೆದ ಹುಡುಗಿ, ಜೀವನದಲ್ಲಿ ತುಂಬಾ ಆಸೆ ಕನಸು ಹೊತ್ತು ಏನಾದರೂ ಸಾಧಿಸಿ ಸಮಾಜದಲ್ಲಿ ಸ್ಥಾನ ಮಾನ ಗಳಿಸಿ ತನ್ನದೇಯಾದ ಹೆಸರು ಮಾಡಬೇಕೆಂದು ಆಸೆ ಕನಸು ಹೊತ್ತಿದ್ದ ರಾಧಾ. ರಾಧಾ ತುಂಬಾ ಜಾಣೆ.ಇವಳ ತಂದೆ ತಾಯಿಗೆ ನಾಲ್ಕು ಜನ ಹೆಣ್ಣಮಕ್ಕಳು. ಇವಳು ತಂದೆ ತಾಯಿಗೆ ನಾಲ್ಕನೆಯ ಮಗಳು. ತಂದೆ ತಾಯಿ ನಾಲ್ಕೂ ಹೆಣ್ಣು ಮಕ್ಕಳನ್ನು ತುಂಬಾ ಮುದ್ದಾಗಿ ಬೆಳೆಸಿದ್ದರು. ಎಲ್ಲರೂ ಸರಸ್ವತಿ ಪುತ್ರಿಯರಂತೆ ತುಂಬಾ ಜಾಣರು. ರಾಧಾ ನೋಡಲು ಸಾದರಣವಾಗಿದ್ದಳು ಆದರೆ ಪ್ರತಿಭೆಯ ಗಣಿಯಾಗಿದ್ದಳು ಸರಸ್ವತಿ ಪುತ್ರಿಯಂತೆ ತುಂಬಾ ಬುದ್ಧಿವಂತ ಹುಡುಗಿ. ಯಾವಾಗಲೂ ಶಾಲೆಯಲ್ಲಿ ಪಠ್ಯ ಹಾಗೂ ಸಹ ಪಠ್ಯ ಚಟುವಟಿಕೆಯಲ್ಲಿ ಮೊದಲನೆಯ ಸ್ಥಾನ ಪಡೆಯುತ್ತಿದ್ದಳು. ಎಲ್ಲರಿಗೂ ಅಚ್ಚಮೆಚ್ಚಿನ ಮಗಳು ಹಾಗೂ ವಿದ್ಯಾರ್ಥಿನಿಯಾಗಿದ್ದಳು. ಕಷ್ಟವೆಂದರೆ ಏನು ಎಂದು ತಿಳಿಯದಂತೆ ತಂದೆ ತಾಯಿ ಬೆಳೆಸಿದ್ದರು. ರಾಧಾ D. Ed ಓದಿದಳು ಅವಳ ಶಿಕ್ಷಣ ಮುಗಿದ ಮೇಲೆ ತಂದೆ ತಾಯಿ ಗುಣ ನಡತೆಯಲ್ಲಿ ಉತ್ತಮನಾದ ನೋಡಲು ಸುಂದರನಾದ ಯುವಕನೊಂದಿಗೆ ಮದುವೆ ಮಾಡಿದರು. ಆ ಯುವಕ ತಂದೆ ತಾಯಿಗೆ ಒಬ್ಬನೇ ಮಗ ತುಂಬಾ ಜಾಣ ಹಾಗೂ ಪ್ರತಿಭಾವಂತನಾಗಿದ್ದ. ಆಸ್ತಿ ಪಾಸ್ತಿ ಅಷ್ಟೇನಿಲ್ಲದಿದ್ದರೂ ಗುಣ, ಸ್ವಭಾವ ಮತ್ತು ನಡತೆಯಲ್ಲಿ ಶ್ರೀಮಂತನಾಗಿದ್ದ. ಅವನದು ತುಂಬಾ ಸಂಪ್ರದಾಯಸ್ಥ ಕುಟುಂಬ. ಆದರೂ ಅವರು ಸೊಸೆ ಮತ್ತು ಮಗನ ಮೇಲೆ ಯಾವುದೇ ರೀತಿಯಾದ ಪದ್ಧತಿಗಳ ಹೊರೆ ಹಾಕಿರಲಿಲ್ಲ. ರಾಧಾ ಮದುವೆಯಾದ ಮೇಲೂ ತನ್ನ ಶಿಕ್ಷಣ ಮುಂದುವರೆಸಿದಳು.ತುಂಬಾ ಪ್ರೀತಿಸುವ ಗಂಡ, ಮಗಳಂತೆ ಕಾಣುವ ಅತ್ತೆ ಮಾವ ಸುಂದರ ಸಂಸಾರ ಸ್ವರ್ಗಕ್ಕೆ ಮೂರೇ ಗೇಣು ಎಂದು ರಾಧಾ ಮನದಲ್ಲಿ ಅಂದು ಕೊಳ್ಳುತ್ತಿರುವಾಗ ಆ ದಂಪತಿಗಳಿಗೆ ಕಾಡುವ ಒಂದೇ ಒಂದು ಕೊರತೆ ಮದುವೆಯಾಗಿ 12 ವರ್ಷ್ ಗಳು ಕಳೆದರೂ ಇನ್ನೂ ಮಕ್ಕಳಾಗದೇ ಇರುವುದು. ಆ ದಂಪತಿಗಳಿಗೆ ಮಕ್ಕಳು ಆಗದೆ ಇರುವ ಕಾರಣ ಅವರು ತಂದೆ ತಾಯಿ ಹಾಗೂ ಸಮಾಜದ ಕಣ್ಣಲ್ಲಿ ತುಂಬಾ ಕೀಳಾಗಿ ಕಾಣ ತೊಡಗಿದರು. ಎಲ್ಲರೂ ಅವರನ್ನೂ ನಿಷ್ಕೃಷ್ಟ ರಾಗಿ ನೋಡಲು ಪ್ರಾರಂಬಿಸಿದರು. ರಾಧಾ ನಿಧಾನವಾಗಿ ಅತ್ತೆಯ ಚುಚ್ಚು ಮಾತುಗಳಿಂದ ಬೇಸತ್ತು ಸೋತು ಸುಣ್ಣವಾದಳು ದಿನೇ ದಿನೇ ಅವಳಿಗೆ ಚಿಂತೆ ಹೆಚ್ಚಿತು. ದಿನೇ ದಿನೇ ಆ ದಂಪತಿಗಳು ಸಮಾಜದಿಂದ, ಜನರಿಂದ ದೂರವಾಗತೊಡಗಿದರು. ಕೊನೆಗೆ ತಂದೆ ತಾಯಿಯಿಂದಲು ದೂರವಾದರು. ಯಾವುದೇ ಸಾಮಾಜಿಕ ಹಾಗೂ ಸಾಂಪ್ರದಾಯಿಕ ಕಾರ್ಯಕ್ರಮಗಾಳಿಗೂ ಅವರು ಹೋಗುವುದನ್ನು ನಿಲ್ಲಿಸಿದರು. ಕಾರಣ ಎಲ್ಲಿ ಹೋದರೂ ಒಂದೇ ಪ್ರಶ್ನೆ ಏಕೆ ನಿಮಗೆ ಮಕ್ಕಳಾಗಿಲ್ಲ ಎಂದು. ಅದು ಬಿಡಿ ಎಷ್ಟೋ ಜನ ಇವರು ಎದುರಿಗೆ ಬಂದರೆ ಅವರವರ ಮಕ್ಕಳನ್ನು ಇವರಿಂದ ದೂರ ಕರೆದುಕೊಂಡು ಹೋಗುತ್ತಿದ್ದರು ಯಾರೂ ತಮ್ಮ ಮಕ್ಕಳನ್ನು ಇವರ ಕೈಗೆ ಕೊಡುತ್ತಿರಲಿಲ್ಲ. ಅದು ಇವರಿಗೆ ನೋವಿನ ಸಂಗತಿ. ಅವರು ತೋರಿಸದೆ ಇರುವ ಡಾಕ್ಟರ್ ಇಲ್ಲ. ಬೇಡಿಕೊಳ್ಳದೆ ಇರುವ ದೇವರಿಲ್ಲ. ತಿನ್ನದೇ ಇರುವ ಜನರ ಚುಚ್ಚು ಮಾತುಗಳಿಲ್ಲ ಪಾಪ ಜೀವನದಲ್ಲಿ ತುಂಬಾ ಕೀಳರಿಮೆಗೆ ಒಳಗಾದ ದಂಪತಗಳಿಬ್ಬರು. ಆದರೆ ಗಂಡ ಹೆಂಡತಿ ಮಾತ್ರ ಒಳ್ಳೆಯತನವನ್ನು ತಮ್ಮ ಶಕ್ತಿ ಎಂದು ನಂಬಿದ್ದರು. ಯಾರಿಗಾದರೂ ಕಷ್ಟ ಎಂದರೆ ನೋಡಿಕೊಂಡು ಕುಳಿತುಕೊಳ್ಳುವ ವ್ಯಕ್ತಿತ್ವದವರಾಗಿರಲಿಲ್ಲ , ಸಹಾಯಕ್ಕೆ ಸದಾ ಸಿದ್ಧರಾಗಿದ್ದರು. ಗಂಡ ಹೆಂಡಿರ ಮಧ್ಯ ಅಪಾರ ಪ್ರೀತಿ, ಸ್ನೇಹಕ್ಕೆ ಕೊರತೆ ಇರಲಿಲ್ಲ ತುಂಬಾ ಮುದ್ದಾದ, ನೋಡಿದವರು ದೃಷ್ಟಿ ಬಿಡುವಂತಹ ಜೋಡಿ. ಯಾರೇ ಏನೇ ಅಂದರೂ ಇಡೀ ಸಮಾಜವೇ ಕೀಳಾಗಿ ಕಂಡರೂ ಗಂಡ ರವಿ ಮಾತ್ರ ರಾಧಾ ಗೆ ಸದಾ ಬೆನ್ನೆಲುಬಾಗಿದ್ದು, ಅವಳಿಗೆ ಪ್ರೋತ್ಸಾಹ ನೀಡುತ್ತಿದ್ದ. ಮಕ್ಕಳಾಗದೆ ಇರುವವರಿಗೆ ಬದುಕುವ ಅರ್ಹತೆ ಇಲ್ಲವೇ?ಅವರಿಗೆ ಸಮಾಜದಲ್ಲಿ ಉತ್ತಮ ಸ್ಥಾನ ಬೇಡವೇ? ಎಂದು ನೊಂದು ಬೆಂದ ಜೀವ, ಸದಾ ನೋವುಂಡ ಜೀವ ಈ ಜೀವಕ್ಕೆ ಸಾಂತ್ವನ ನೀಡಬಲ್ಲ ಮನಸ್ಸು ಈ ಸಮಾಜದಲ್ಲಿ ಎಲ್ಲಿದೆ? ಎಂದು ಜೀವನದಲ್ಲಿ ಜಿಗುಪ್ಸೆಗೊಂಡು ಮನದಲ್ಲಿ ಹಲವಾರು ಪ್ರಶ್ನೆಗಳನ್ನು ತನ್ನಲ್ಲೇ ಹಾಕಿಕೊಂಡು ಉತ್ತರ ಸಿಗದೆ ಹೋದಾಗ ತಟ್ಟನೆ ಆಕಾಶದಲ್ಲಿ ಮಿಂಚು ಬಂದಂತೆ ಜೀವನದಲ್ಲಿ ಒಂದು ಆಸೆಯ ಚಿಲುಮೆ ಉಕ್ಕಿತು. ಆಗ
ಅವರು ಆರಿಸಿಕೊಂಡ ದಾರಿ ಎಲ್ಲರೂ ಶ್ಲಾಗಿಸುವಂತದ್ದು. ಅವರು ಇಡೀ ಸಮಾಜವೇ ಅವರತ್ತ ನೋಡುವಂತೆ ಮಾಡಬೇಕು, ಕೀಳಾಗಿ ಕಾಣುವ ಜನರೇ ಅವರಿಗೆ ತಲೆ ಎತ್ತಿ ನೋಡಿ ಹಾಡಿ ಹೊಗಳಿ ಸನ್ಮಾನಿಸಿಸಬೇಕು ಎಂದು ಹಠ ಹಿಡಿದು ಅವರಿಗೆ 12 ವರ್ಷ ಮಕ್ಕಳಾಗದೇ ಇರುವುದು ಅವರು ಜೀವನದಲ್ಲಿ ಮುಂದೆ ಬರಲು, ಏನಾದರೂ ಸಾಧಿಸಲು ದೈವ ನೀಡಿದ ಅನುಗ್ರಹ ಎಂದು ತಿಳಿದು ಆ ಸಮಯವನ್ನು ಸದಪಯೋಗ ಮಾಡಿಕೊಳ್ಳಲು ನಿರ್ಧಾರಿಸಿದರು . ಆ ದೇವರೇ ನಮಗೆ ನಾವು ಯಾರು? ನಮ್ಮ ಶಕ್ತಿ ಏನು? ನಮ್ಮಿಂದ ದೇಶಕ್ಕೆ ಏನಾದರೂ ಕೊಡುಗೆ ಕೊಡಲು ಸಾದ್ಯವೇ? ಕಷ್ಟ ಕೇವಲ ಮನುಷ್ಯನಿಗೆ ಬರುತ್ತದೆ ಮರಕ್ಕಲ್ಲ. ಇದು ಆ ದೇವರು ನಮಗೆ ನೀಡಿದ ಒಂದು ಅವಕಾಶ ಎಂದು ಅರಿತು ಒಂದು ನಿರ್ಧಾರಕ್ಕೆ ಬಂದರು. ಆಗ ಅವರಿಗೆ ಸಹಾಯ ಮಾಡಿದವರು ಕೇವಲ ರವಿ ಮತ್ತು ರಾಧಾ ಸ್ನೇಹಿತರು.
ಅವಳ ಗಂಡ ರವಿಯ ಸಹಾಯ ಮತ್ತು ಪ್ರೋತ್ಸಾಹದಿಂದ ಡಿಗ್ರಿ ಮುಗಿಸಿ, ಬಿ. ಎಡ್ ಮುಗಿಸಿ ಇಂಗ್ಲೀಷ್ ಸಾಹಿತ್ಯ ದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಳು. ನಂತರ ಟಿ. ಇಟಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು, ಅರ್ಹತೆಯನ್ನು ಪಡೆದು ಸಿ.ಇಟಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಶಿಕ್ಷಕಿಯದಳು. ಹಲವಾರು ಮಕ್ಕಳಿಗೆ ವಿದ್ಯಾದಾನ ಮಾಡುವುದರ ಮೂಲಕ ದೇಶಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುವ ನಿಟ್ಟಿನಲ್ಲಿ ಹಗಲಿರುಳು ಎನ್ನದೆ ನಿಸ್ವಾರ್ಥ ಸೇವೆಯಲ್ಲಿ ತೊಡಗಿದರು. ಅವಳ ಗಂಡ ರವಿ ಸದಾ ಅವಳಿಗೆ ಬೆನ್ನೆಲುಬಾಗಿ ನಿಂತು ಅವಳ ಸೇವೆಗೆ ಪ್ರೋತ್ಸಾಹಿಸಿದ. "ಸಬರ ಕಾ ಫಲ್ ಮೀಠಾ ಹೋತಾ ಹೈ" ಎನ್ನುವಂತೆ ಅವರು ಮಾಡುವ ಸೇವೆಗೆ, ಅವರ ಒಳ್ಳೆಯತನಕ್ಕೆ ಮೆಚ್ಚಿ ಭಗವಂತ ಅವರಿಗೆ ಆಶೀರ್ವದಿಸಿದ. ರಾಧಾ ಗರ್ಭಿಣಿಯಾದಳು. ಕೀಳಾಗಿ ಕಂಡ ಅತ್ತೆ ಮಾವ ವಿಷಯ ತಿಳಿದೊಡನೆ ಅವರ ವರಸೆಯೆ ಬದಲಿಸಿದರು ಮಗ ಮತ್ತು ಸೊಸೆಯನ್ನು ತುಂಬಾ ಚೆನ್ನಾಗಿ ಮಾತನಾಡಿಸುವುದು, ಪ್ರೀತಿಯಿಂದ ಕಾಣುವುದು, ಆದರ ಅತಿತ್ಯದಿಂದ ಅವರ ಬೇಕು ಬೇಡಗಳನ್ನು ಈಡೇರಿಸಲು ಪ್ರಾರಂಭಿಸಿದರು. ನಿಧಾನವಾಗಿ ಜನರು ಅವರೊಂದಿಗೆ ಒಳ್ಳೆಯ ರೀತಿಯಲ್ಲಿ ವರ್ತಿಸಲು ಪ್ರಾರಂಬಿಸಿದರು. ಆದರೆ ರಾಧಾ ಮತ್ತು ರವಿಗೆ ಮಾತ್ರ ಎಲ್ಲರ ವರ್ತನೆ ನಾಟಕ, ನಟನೆ ಎಂದೂ ಭಾಸವಾಗುತ್ತಿತ್ತು. ಕಾರಣ ಅವರು ಅನುಭವಿಸಿದ ನೋವು, ಜನರ ಮತ್ತು ತಮ್ಮ ಸ್ವಂತಿಕೆಯವರಿಂದ ಪಡೆದ ನಿಂದನೆ, ಕೀಳರಿಮೆ ಯೇ ಪ್ರಮುಖ ಕಾರಣ. ಅವರಿಗೆ ಒಂದು ಮುದ್ದಾದ ಹೆಣ್ಣು ಮಗುವಾಯಿತು. ಅವರು ತಂದೆ ತಾಯಿಯಾದರೂ. ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಸುಂದರ ಸಂಸಾರ ನಡೆಸಲು ಮುಂದಾದರು. ದೇಶಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುವ ಇವರ ಕಾರ್ಯ ಮುಂದುವರೆಯಿತು.
ನೀತಿ:- ಕಷ್ಟ ಕೇವಲ ಮನುಷ್ಯನಿಗೆ ಬರುತ್ತದೆ ಮರಕ್ಕಲ್ಲ, ಕಷ್ಟ ಬಂದಾಗ ಎದೆಗುಂದಂದೆ ದೈರ್ಯದಿಂದ ಎದುರಿಸಬೇಕು. ನಮ್ಮ ಕಷ್ಟವನ್ನು ಕಷ್ಟ ಎಂದು ಜೀವನದಲ್ಲಿ ತಲೆಯ ಮೇಲೆ ಕೈ ಹೋತ್ತು ಕುಳಿತುಕೊಳ್ಳುವುದರ ಬದಲು ಆ ಕಷ್ಟದ ಸಮಯವನ್ನು ಏನಾದರೂ ಸಾಧಿಸಲು ದೇವರು ನಮಗೆ ನೀಡಿದ ಒಂದು ಒಳ್ಳೆಯ ದಾರಿ ಎಂದು ತಿಳಿದು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಅಂದಾಗ ಮಾತ್ರ ಸಮಾಜದಲ್ಲಿ ಉತ್ತಮ ಜೀವನ ಕಟ್ಟಿಕೊಳ್ಳಲು ಸಾಧ್ಯ.
"Failures are the stepping stones of succes